ಇಂಡಿಯನ್ ಸೊಸೈಟಿ ಆಫ್ ಅಡ್ವರ್ಟೈಸóರ್ಸ್

ಜಾಹೀರಾತು ಸಂಸ್ಥೆಗಳು ಯೋಗ್ಯರೀತಿಯಲ್ಲಿ ಪ್ರಸಾರ ಮಾಡುವಂತೆ ನೆರವು ನೀಡುವ ಸಂಸ್ಥೆ (ಐ.ಎಸ್.ಎ.). 1952 ಸೆಪ್ಟಂಬರ್‍ನಲ್ಲಿ ಬೊಂಬಾಯಿನಲ್ಲಿ ಅಸ್ತಿತ್ವಕ್ಕೆ ಬಂತು. ಜಾಹೀರಾತುಗಳನ್ನು ಕುರಿತ ಆರ್ಥಿಕ, ನೈತಿಕ ರೀತಿನೀತಿಗಳನ್ನು ರೂಪಿಸುವುದು, ಸದಸ್ಯರಿಗೆ ಈ ವಿಷಯದಲ್ಲಿ ಮಾರ್ಗದರ್ಶನ ಮಾಡುವುದು, ಅವರ ಹಿತ ಸಂಬಂಧಗಳನ್ನು ಕಾಪಾಡುವುದು-ಇವು ಈ ಸಂಸ್ಥೆಯ ಮುಖ್ಯ ಉದ್ದೇಶಗಳಾಗಿವೆ. ಜೊತೆಗೆ ಈ ವೃತ್ತಿಯಲ್ಲಿನ ವಂಚನೆ, ಮೋಸಗಾರಿಕೆಗಳನ್ನು ಬಯಲಿಗೆಳೆವ ಕಾರ್ಯವೂ ಇದಕ್ಕೆ ಸೇರಿದ್ದು. ಜಾಹೀರಾತುಗಳ ವಿಷಯದಲ್ಲಿ ಸದಸ್ಯರಲ್ಲಿ ಪರಸ್ಪರ ಸಮಾನತೆಯನ್ನು ಕಾಪಾಡಿಕೊಳ್ಳುವುದೂ ಅವರಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುವುದೂ ಇದರ ಕೆಲಸಗಳಾಗಿವೆ.								
(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ